请输入您要查询的百科知识:

 

词条 Draft:Savita Maharshi
释义

  1. '''ಶ್ರೀ ಶ್ರೀ ಶ್ರೀ ಸವಿತಾ ಮಹರ್ಷಿ ಚರಿತ್ರೆ'''''''''[edit]

      1.ಚೌಲಕರ್ಮ, 2.ಆಯುರ್ವೇದ , 3. ಸಂಗೀತ ಅದರ ಜೊತೆಗೆ ಪರಿಕರಣಗಳನ್ನು ನೀಡಿರುತ್ತಾರೆ.[edit]    ಚೌಲಕರ್ಮ[edit]    ಆರ್ಯುವೇದ (ಆಯುರ್ ಆರ್ಜನೆ)[edit]    ಸಂಗೀತ[edit]  

  2. ಪರಿಕರಗಳು[edit]

  3. ಐತಿಹಾಸಿಕ ಶಾಸನಗಳಲ್ಲಿ ಸವಿತಾ ಬಂದುಗಳ ಉಲ್ಲೇಖ[edit]

{{not english}}

'''ಶ್ರೀ ಶ್ರೀ ಶ್ರೀ ಸವಿತಾ ಮಹರ್ಷಿ ಚರಿತ್ರೆ'''''''''[edit]

   ಪುರಾಣ ಗ್ರಂಥಗಳ ಪ್ರಕಾರ ಸವಿತಾ ಎಂಬ ಮಹರ್ಷಿದೇವ ದೇವತೆಗಳ ಆಯುಷ್ಕರ್ಮ ಸೇವೆಯನ್ನು ಮಾಡುತ್ತಿದ್ದರೆಂದು ಕಾಶಿ ಕ್ಷೇತ್ರದಲ್ಲಿ ದೊರೆತ ಮಹಾಗ್ರಂಥಗಳಲ್ಲಿ ಉಲ್ಲೆಖಿಸಿರುವಂತೆ ಈ ದೇಶದಲ್ಲಿ ಕರೆಯುವ ನಾನಾ ಹೆಸರುಗಳಿಂದ ಕರೆಯುವ ಸವಿತಾಸಮುದಾಯದ ಮೂಲಪುರುಷ ಸವಿತಾ ಮಹರ್ಷಿ ಎಂದು ಪುರಾಣ ಗ್ರಂಥಗಳಲ್ಲಿ ತಿಳಿದು ಬರುತ್ತದೆ.                        ಬ್ರಹ್ಮದೇವ,ಶಿವ,ಮತ್ತು ವಿಷ್ಣು ಜೊತೆ ಯಾಗ ಯಜ್ಞಗಳನ್ನು ಮಾಡುವ ಸಂದರ್ಭದಲ್ಲಿ ಶಿವನ ಮುಖದ ಗಡ್ಡಕ್ಕೆ ಮತ್ತು ಮೀಸೆಗೆ ಅಗ್ನಿ ಸ್ಪರ್ಶವಾಗಿ ಶಿವನು ಅಶುಚಿಯಾಗಿ ಕಾಣುತ್ತಿರುತ್ತಾನೆ.ಇದನ್ನು ಪಕ್ಕದಲ್ಲಿರುವ ಪಾರ್ವತಿಯು ನೋಡಿ ಅದನ್ನು ತೆಗೆಯುವಂತೆ ಶಿವನಿಗೆ ಸೂಚಿಸಿದ ಕಾರಣ ಅದರಂತೆ ಶಿವನು ತನ್ನ ಬಲಗಣ್ಣಿನಿಂದ ಒಬ್ಬ ಪುರುಷನನ್ನು ಸೃಷ್ಟಿಸಿದನು ಅವನು ನಾನಾ ವಿಧದ ಸಲಕರಣೆಗಳ ಪೆಟ್ಟಿಗೆ ಸಮೇತ ಹುಟ್ಟಿ ಬಂದು ಶಿವನ ಗಡ್ಡ ಮತ್ತು ಮಿಸೇಗಳನ್ನು ತೆಗೆದು ಮೆಚ್ಚಿಸಿದನು.ಆದರಿಂದ ಸುಪ್ರಿತನಾದ ಶಿವನು ಅವನ ಸೇವೆಯ ಕೊಡುಗೆಯಾಗಿ ವಿವಿದ ವಾದ್ಯಗಳನ್ನು ದಯಪಾಲಿಸಿದನು.ಆತನೆ ಕ್ಷೌರಿಕ ಜನಾಂಗದ ಮೂಲಪುರುಷನಾದ

ಶಿವನ ಬಲಗಣ್ಣಿನಿಂದ ಹುಟ್ಟಿದ ಮನುಷ್ಯನಿಗೆ ಸವಿತಾಮಹರ್ಷಿ ಎಂದು (ಶಿವನ ಕಣ್ಣುಗಳನ್ನು ಸೂರ್ಯ ಮತ್ತು ಚಂದ್ರಗಳು ಎಂದು ಕರೆಯುತ್ತಾರೆ.) ಸೂರ್ಯನ ಮತ್ತೊಂಧು ಹೆಸರು ಸವಿತೃ ಆಗಿರುವುದರಿಂದ ಸವಿತಾ ಮಹರ್ಷಿ ಎಂದು ಪೌರಾಣಿಕ ಗ್ರಂಥಗಳಲ್ಲಿ ಮತ್ತು ಪುಣ್ಯಗಂಥಗಳಲ್ಲಿ ಉಲ್ಲೇಖವಾಗಿವೆ.

            ರಥಸಪ್ತಮಿಯ ಮೇಘಮಾಸದಂದು ಸವಿತಾ ಮಹರ್ಷಿ ಜಯಂತಿ ಶುಕ್ಲ ಪಕ್ಷದ ಸಪ್ತಮಿದಿನ ಸೂರ್ಯಾರಾದನೆಗೆ ವೀಶೇಷ ಸರ್ವದಿನ ಸೂರ್ಯ ಸಮಭಾಜಕ ರೇಖೆಯನ್ನು ಉತ್ತರಾಬಿಮುಖವಾಗಿ ಹಾದು ಹೋಗುವ ಸಮಯ ಇಲ್ಲಿಂದ ಹಗಲು ಮತ್ತು ರಾತ್ರಿ ಸಮ ಪ್ರಮಾಣದಲ್ಲಿರುತ್ತವೆ. ಈ ರಥ ಸಪ್ತಮಿಯು ಋತುಮಾನದ ಹಬ್ಬ ಸೂರ್ಯ ಸಾಕ್ಷ್ಯಾತ ಶ್ರಿಮನ್ ನಾರಾಯಣನ ಪ್ರತಿರೂಪ ಈ ದಿನದಂದು ಸೂರ್ಯನಾರಾಯಣ ಉಪಾಸಕರಿಗೆ ಸವಿತಾಜನರೆಂಧು ಕರೆಯುವರು. ಈ ಉಪಾಸನ ಮಾಡುವುದರಿಂದ ಬ್ರಹ್ಮವಿದ್ಯೆ ಮಹಾವಿದ್ಯೆ ಮತ್ತು ವರಹ ವಿದ್ಯೆಗಳು ಲಭಿಸುತ್ತದೆ.                        ನಂತರ ಬ್ರಹ್ಮನಿಗೆ ತನ್ನ ಉಪನಯನದ ಜೊತೆಗೆ ಮೊದಲ ಆಯಷ್ಕರ್ಮವನ್ನು ಮಾಡಿದ ಮೇಲೆ ಲೋಕಕಲ್ಯಾಣಕ್ಕಾಗಿ ನಿನ್ನ ಸೇವೆ ಅಗತ್ಯವಿರುವುದರಿಂದ ಈ ಭೂಲೋಕಕ್ಕೆ ಆಯುಷ್ಕರ್ಮದ ಸೇವೆಯನ್ನು ನೀನು (ಸವಿತಾ ಮಹರ್ಷಿ)ನೀಡಬೇಕು ಎಂದು ಆಜ್ಞೇ ಮಾಡಿರುವ ಪ್ರತೀತಿ ಪೌರಾಣಿಕ ಗ್ರಂಥಗಳಲ್ಲಿ ಮತ್ತು ಪುಣ್ಯಗಂಥಗಳಲ್ಲಿ ಉಲ್ಲೇಖವಾಗಿವೆ.                           ಸವಿತಾ ಮಹರ್ಷಿ ವೇದಗಳ ಕಾಲದ ರಾಜ ಋಷಿಗಳಾದ ರಾಜ ಸೋಮ ಬ್ರಹ್ಮ,ಮತ್ತು ರಾಮವರ್ಮಬ್ರಹ್ಮರನ್ನು ಇವರಿಗೆ ಸವಿತಾ ಆಯುಷ್ಕರ್ಮವನ್ನು ಮಾಡಿ ಯಜ್ಞೋಪವಿಥವನ್ನು ದಾರಣೆ ಮಾಡಿಸಿದರು. ಎಂಬ ಪ್ರತಿತಿಯು ಇದೆ. ಬ್ರಹ್ಮಜ್ಞಾನವನ್ನು ಹೊಂಧಿದ ಸವಿತಾ ಮಹರ್ಷಿಯವರು ಹಿಂದು ಧರ್ಮದ ಪವಿತ್ರ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದರು ಎಂದು ಪ್ರತೀತಿ ಇದೆ ಸವಿತಾ ಮಹರ್ಷಿಯ ಪುತ್ರಿಯಾದ ಗಾಯತ್ರಿದೇವಿಯ ಮಂತ್ರಗಳಲ್ಲಿ ಸವಿತೃ ಎಂಬ ಪದವು ಸ್ಪಷ್ಟವಾಗಿ ಕಾಣುತ್ತದೆ.ಸಂಸ್ಕೃತ ಗ್ರಂಥವಾದ ನಾಭಿಕ್ ಪುರಾಣದಲ್ಲಿ ಸವಿತಾ ಮಹರ್ಷಿ ಹುಟ್ಟಿದರಬಗ್ಗೆ ಉಲ್ಲೇಖವಿದೆ.ಪವಿತ್ರ ಕುಮಾರಸಂಬವ ಗ್ರಂಥದಲ್ಲಿ ಶಿವನ ಪುತ್ರ ಷಣ್ಮುಖನ ಜನನದ ನಂತರ ಬಾಲಕ ಷಣ್ಮುಖದ ಚೌಲಕರ್ಮ ಸೇವೆ ಮಾಡಿರುವ ಉಲ್ಲೇಖವಿರುತ್ತದೆ.                  ದನ್ವಂತರಿ ರೂಪ,ವೇದಗಾಯನ ರೂಪ,ಆಯುಷ್ಯ ವೃದ್ದಿ ರೂಪ,ಸವಿತೃದೇವನ ಕೈಯಲ್ಲಿ ವೇದ ಮುಂಧೆ ವೀಣೆ ಇನ್ನೋಂದು ಕೈಯಲ್ಲಿ ಅಮೃತದ ಕುಂಬ ಮತ್ತು ಇನ್ನೋಂದು ಕೈಯಲ್ಲಿ ಜಪಮಾಲೆ ಇನ್ನೋದು ಕೈಯಲ್ಲಿ ಪದ್ಮಕಮಲ, ಮುಂದೆ ಹಂಸ ಮತ್ತೋಂದು ಕಡೆ ಪೂಜಕಮಂಡಲ ಸವೀತೃದೇವ ಪದ್ಮದಲ್ಲಿ ಕುಳಿತಿರುವಂತೆ ಹೇಳಲು ಮತ್ತೋದು ಕಾರಣವೆನೆಂದರೆ ಪದ್ಮಗಳು ಹರಿಯುವ ನೀರಿನಲ್ಲಿ ಹುಟ್ಟುವುದಿಲ್ಲ ನಿಂತ ನೀರಿನ ಕೇಸರಿದಲ್ಲಿ ಹುಟ್ಟುತ್ತದೆ.ಕೇಸರಿನಲ್ಲಿ ಹುಟ್ಟಿದ ಪದ್ಮಗಳು ಹರಿಯುವ ನೀರಿನಲ್ಲಿ ಹುಟ್ಟುವುದಿಲ್ಲ ನಿಂತ ನೀರಿನ ಕೇಸರಿನಲ್ಲಿ ಹುಟ್ಟುತ್ತದೆ. ಕೇಸರಿನಲ್ಲಿ ಹುಟ್ಟಿದ ಪದ್ಮಗಳು ನೀರಿಗೆ ಅಂಟಿಕೊಳ್ಳುವುದಿಲ್ಲ. ಕೆಸರು ಅಜ್ಞಾನದ ಸಂಕೇತ ಪದ್ಮಗಳಲ್ಲಿ ಕೆಂಪು ಮಿಶ್ರಿತ ಬಣ್ಣವಿದ್ದು ವಿಜಯದ ಸಂಕೇತ ಈ ಕಾರಣದಿಂದ ದೇವಿ ಮತ್ತು ದೇವಾನುದೇವತೆಗಳ ಪದ್ಮಾಸನಗಳನ್ನು ಪದ್ಮ ಹಸ್ತಗಳನ್ನು ಹೊಂದಿರುತ್ತಾರೆ. ನಮ್ಮ ಸವಿತಾ ಮಹರ್ಷಿ ಕೈಯಲ್ಲಿ ಜಪಮಾಲೆ ವೇದಗಳನ್ನು ನೀಡಿದ್ದಾರೆ. ಕಾರಣ ವೀಣೆಯ ಸಂಗೀತದ ಮೂಲಕ ಗಾಯನವೇಂದರೆ ಸಾಮವೇದಮಂತ್ರಗಳ ಗಾಯನ ಮತ್ತೊಂದು ಕೈಯಲ್ಲಿ ಅಮೃತ ಕುಂಬ ಅಂದರೆ ನಮ್ಮ ಪೂರ್ವಜರು ಭಾರತದ ವೈದ್ಯರುಗಳು ಆಗಿದ್ದರು. ಸವಿತಾ ಮಹರ್ಷಿ ಮುಂದೆ ಹಂಸವಿದೆ.ಶಾರದದೇವತೆಯ ಮುಂದೆ ಹಂಸವಿದೆ. ಗಾಯತ್ರಿ ದೇವತೆಯ ಮುಂದೆಯು ಹಂಸವಿದೆ.ಹಂಸ ಪಕ್ಷಿ ಜಾತಿಯಲ್ಲಿ ಹಂಸವಾಗಿರುವ ಮತ್ತೋಂದು ಪಕ್ಷಿಗಿಲ್ಲ ಎಕೆಂಧರೆ ಹಂಸ ಪಕ್ಷಿಯು ಹಾಲು ಮತ್ತು ನೀರನ್ನು ಬೆರೆಸಿ ಒಂದೇ ಪಾತ್ರೆಯಲ್ಲಿ ಹಾಲನ್ನು ಮಾತ್ರ ಕುಡಿದು ನೀರನ್ನು ಬಿಡುತ್ತದೆ. ಈ ವಿಜ್ಷಾನವು ಹಂಸ ಪಕ್ಷಿಗೆ ಮಾತ್ರಇದೆ ಇದರಿಂದ ನಾವು ತಿಳಿಯಬೇಕಿರುವುದು ವಿದ್ಯೆಯಿಂದ ಮನುಷ್ಯನಿಗೆ ವಿವೇಕ ಶಕ್ತಿ ಸಿಗುತ್ತದೆ ಎಂಬುದು ಮನುಷ್ಯರಲ್ಲಿ ಕೇಶ ನರ್ತನರು, ಅತಿ ಬುದ್ದಿವಂತರು ಹಾಗೂ ಚಮತ್ಕಾರಿಗಳು ಎಂದು ಚಾಣುಕ್ಯ ವರ್ಣಿಸಿದ್ದಾನೆ.ಗಾಯತ್ರಿಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯುತ್ತಾರೆ. ಗಾಯತ್ರಿ ಮಂತ್ರ ಇರುವ 

ಪದಗಳ ಅರ್ಥ ಸಂಪಾದಿಸಿ

ಓಂ - ಓಂ

ಭೂಃ- ಭೂಮಿ

ಭುವಃ- ಅಂತರಿಕ್ಷ

ಸ್ವಃ- ಆಕಾಶ

ತತ್ - ಆ

ಸವಿತಃ- ಸವಿತೃವಿನ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)

ವರೇಣ್ಯಂ - ಪೂಜಾರ್ಹವಾದ

ಭರ್ಗೋ - ತೇಜಸ್ಸನ್ನು

ದೇವಸ್ಯ ದೇವನ

ದೀಮಹಿ- ಧ್ಯಾನಿಸುತ್ತೇವೆ

ಋಗ್ವೇದವೂ ಸೇರಿದಂತೆ, ವೇದಗಳೆಲ್ಲ ಬ್ರಹ್ಮನ ಮುಖಾಂತರ ಹೊಮ್ಮಿದವು ಎಂಬುದು ಪ್ರಚಲಿತದಲ್ಲಿರುವದು ಪುರಾಣ ಕಥೆ.

ಉಪನಯನ ಸಂಸ್ಕಾರದಲ್ಲಿ ಉಪನೀತನಿಗೆ ಈ ಮಂತ್ರವನ್ನು ಉಪದೇಶಿಸುತ್ತಾರೆ. ಬ್ರಹ್ಮೋಪದೇಶ ರೂಪವಾದ ಈ ಮಂತ್ರದಿಂದ ಉಪನೀತ ವಿಪ್ರನಾಗುತ್ತಾನೆ. ಮನುಸಂಸ್ಕೃತಿಯಲ್ಲಿ ತಿಳಿಸಿರುವಂತೆ ಗಾಯತ್ರಿಮಂತ್ರ ಸಕಲ ವೇದಗಳ ಸಾರವಾದುದು, ಪರಬ್ರಹ್ಮ ಸ್ವರೂಪವುಳ್ಳದ್ದು. ಓಂಕಾರಪೂರ್ವಕ ಸಂಧ್ಯಾಕಾಲಗಳಲ್ಲಿ ವೇದಮಾತೃವಾದ ಈ ಮಂತ್ರವನ್ನು ಜಪಿಸುವುದರಿಂದ ವೇದಪಠನ ಪುಣ್ಯ ಲಭಿಸುತ್ತದೆ. ಮಹಾಪಾತಕಗಳು ನಶಿಸುತ್ತವೆ.

ವೈದಿಕ ಕಾಲದಿಂದಲೂ ಗಾಯತ್ರಿ ಮಂತ್ರ ಯಾವುದೇ ವರ್ಗ, ಜಾತಿ ಅಥವಾ ಲಿಂಗಕ್ಕೆ ಸೀಮಿತಪಟ್ಟಲ್ಲ ಯಾರು ಬೇಕಾದರು ಇದನ್ನು ಉಚ್ಚರಿಸಬಹುದು ಎಂಬುವುದನ್ನು ಅನೇಕ ಧರ್ಮಶಾಸ್ತ್ರಜ್ಞರ ಅಭಿಪ್ರಾಯ ಋಗ್ವೇದದ3.62.10ನೇ (3ನೇ ಮಂಡಲ, 62ನೇ ಸೂಕ್ತ, 10ನೇ ರಿಚ ) ಮಂತ್ರವಾಗಿರುವ ಇದು, "ಓಂ ಭೂರ್ಬುವಃ ಸ್ವಃ" ಎಂಬ ಪೀಠಿಕೆ (ಯಜುರ್ವೇದದ ಸೂತ್ರದಂತೆ) ಸೇರಿ ಹೀಗೆ ಬಳಕೆಯಲ್ಲಿದೆ.

ಮಂತ್ರ ಸಂಪಾದಿಸಿ

ದೇವ ನಾಗರಿಯಲ್ಲಿ

ಓಂ ಭೂರ್ಭುವಃ ಸ್ವಃ

(ಋಗ್ವೇದದ 3.62.10 ರಲ್ಲಿರುವ ಮೂಲ ಮಂತ್ರ ತತ್ ಸವಿತುರ್ ವರೇಣ್ಯಂ(ತತ್ ಸವಿತುರ್ :4ಅಕ್ಷ +ವರೇಣ್ಯಂ: 3 ಅಕ್ಷರ?= ವರೇಣಿಯಂ:4=8)

ಸವಿತಾ ಮಹರ್ಷಿಗೆ ಸೃಷ್ಟಿಕರ್ತರು ನೀಡಿದ ಆಯುಷ್ಕರ್ಮಗಳಲ್ಲಿ ಮೂರು ಕರ್ಮಗಳಾದ ,

1.ಚೌಲಕರ್ಮ, 2.ಆಯುರ್ವೇದ , 3. ಸಂಗೀತ ಅದರ ಜೊತೆಗೆ ಪರಿಕರಣಗಳನ್ನು ನೀಡಿರುತ್ತಾರೆ.[edit]

ಚೌಲಕರ್ಮ[edit]

ತಮ್ಮ ಆಯುಷ್ಯದಲ್ಲಿ ಮಾಡಿದ ಕರ್ಮ ಅವರ ಕೇಶಗಳಲ್ಲಿ ಸಂಗ್ರಹವಾಗಿರುತ್ತದೆ. ಕೇಶ ಮುಂಡನ ಮಾಡಿಸುವದರಿಂದ ಕರ್ಮಗಳು ಪರಿಹಾರ ನೀಗಲು ಮುಡಿಯನ್ನು ದೇವರಿಗೆ ಒಪ್ಪಿಸುವ ಸಂಪ್ರದಾಯವನ್ನು ನೋಡಬಹುದು ತಲೆ ಕೂದಲು ಕೇಶ ಮುಂಡನೆ ಮಾಡಿಸಿ ಶುದ್ದಗೊಳಿಸಿ ಅವರನ್ನು ಕರ್ಮ ವಿಮುಕ್ತಿಗೊಳಿಸುವುದೆ ಈ ಚೌಲಕರ್ಮದ ಮರ್ಮವಾಗಿರುತ್ತದೆ. ಅಲ್ಲದೆ ಇಂತಿಂತಹ ದಿನಗಳಲ್ಲಿ ಕ್ಷೌರ ಮಾಡಿಸಿಕೊಂಡರೆ ಆಯಸ್ಸು ವೃದ್ದಿಸುವುದು ಬದುಕಿನಲ್ಲಿ ಯಶಸ್ಸು ಆಗುವುದು ಎಂಬ ನಂಬಿಕೆ ಇಂದಿಗೂ ಜೀವಂತವಾಗಿದಎ.ನಮ್ಮ ಮುಂದಿನ ಬದುಕಿಗೆ ಕೆಡಕಾಗಬಹುದೆಂಬ ಅಳಿಕಿನಿಂದ ಕೆಲವರು ತಾವು ಹುಟ್ಟಿದ ದಿ ನಕ್ಷತ್ರ ಻ಥವಾ ತಿಥಿಗಳಲ್ಲಿ ಕೇಶ ಮುಂಡನ ಮಾಡಿಸಿಕೋಳ್ಳುವುದಿಲ್ಲ.

ಆರ್ಯುವೇದ (ಆಯುರ್ ಆರ್ಜನೆ)[edit]

ಭೂಲೋಕದಲ್ಲಿ ರೋಗರುಜಿನಗಳಿಂದ ಜನರು ಬಳಲುತ್ತಿರುತ್ತಾರೆ,ಮಹರ್ಷಿ ರೋಗಗಳನ್ನು ನಿವಾರಿಸಲು ಸವಿತಾ ಮಹರ್ಷಿಗೆ ಸೃಷ್ಟಿಕರ್ತರು ವರವನ್ನು ಕರುಣಿಸುತ್ತಾರೆ. ಆಗ ಧನ್ವಂತ್ರಿ ನಾರಾಯಣನುಆಶಿರ್ವಾದಿಸುತ್ತಾರೆ.ಭಾರತ ದೇಶದಲ್ಲಿ ಇನ್ನೂರು ವರ್ಷಗಳ ಹಿಂದಿನವರೆಗೂ ಕ್ಚೌರಿಕರೆ ವೈದ್ಯವೃತ್ತಿಯನ್ನು ಸಹ ನಿರ್ವಹಿಸಿರುತ್ತಾರೆ.ಶಸ್ತ್ರಚಿಕಿತ್ಸೆ ಮಾಡುವ ಕೌಶಲ್ಯವನ್ನು ಹೊಂದಿದ್ದು ಈಗಲೂ ಭಾರತದ ಹಲವು ಭಾಗಗಳಲ್ಲಿ ಸವಿತಾ ಸಮುದಾಯದ ಪಾರಂಪರಿಕ ವೈದ್ಯರು ಕಂಡು ಬರುತ್ತಾರೆ.

ವೈದ್ಯ ವೃತ್ತಿಯನ್ನು ಬ್ರಿಟಿಷರು ಭಾರತವನ್ನು ಇತಿಹಾಸಕಾರರ ಲೇಖನದಲ್ಲಿ ಉಲ್ಲೇಖವಾಗಿದೆ. ಮತ್ತು ಇಂದಿಗೂ ಬ್ರಿಟಿಷ ಡಾಕ್ಟರ ಅಸೋಸಿಯೆಷನ್ ನಲ್ಲಿ ಕ್ಷೌರಿಕ ಕಲೆಯನ್ನು ಗುರುತಿಸಿ ಕ್ಷೌರಿಕರೇ ಅಧ್ಯಕ್ಷರಾಗುತ್ತಿರುವುದು ವಾಸ್ತವ, 1530 ರಲ್ಲಿ ಭಾರತದಲ್ಲಿ ಚರ್ಮ ಶಸ್ತ್ರಚಿಕಿತ್ಸೆ ಕೆಲಸವನ್ನು ಕ್ಷರಿಕರು ಮಾಡುತ್ತಿದ್ದರು ಎಂದು ಹಲವು ಭಾರತ ಇತಿಹಾಸಕಾರರ ಲೇಖನದಲ್ಲಿ ಉಲ್ಲೇಖವಾಗಿದೆ.

ಸವಿತಾ ಸಮಾಜದವರನ್ನು ತಮಿಳುನಾಡಿನಲ್ಲಿ ಅಂಬಟ್ಟನ್ ,ಪಂಡಿತನ್,ಪರಿಯಾರಿ ಇಂಥ ಹೆಸರುಗಳಿಂದ ಕರೆಯುತ್ತಾರೆ. ಹಾಗೆಂದರೆ ವೈದ್ಯ ಎಂದು ಅರ್ಥ. ಭಾರತ ದೇಶದ ನಾನಾಬಾಗಗಳಲ್ಲಿ ಸವಿತಾ ಸ್ತ್ರೀಯರು ಸೂಲಗಿತ್ತಿಯಾಗಿ ಕೆಲಸ ಮಾಡುತ್ತಿರುವುದನ್ನು ಈಗಲೂ ನೋಡಬಹುದು ಮತ್ತು ಭಾರತ ದೇಶದ ನಾಣಾಭಾಗಗಳಲ್ಲಿ ಈಗಲೂ ಕ್ಷೌರಿಕರು ವೈದ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ವಾಸ್ತವ ಅಂಶವಾಗಿದೆ.

ಸಂಗೀತ[edit]

ಸಂಗೀತ ಕೆಲ ವೇದಗಳಿಂದ ಬಂದ ವರವಾಗಿದ್ದು, ಶಿವನ ಡಮರುಗದಿಂದ ಹೊಮ್ಮಿದ ನಾದಗಳ ಅನುಕರಣೆ ಮಾಡಿ ಸವಿತಾ ಮಹರ್ಷಿಯು ಸಾಮವೇದದಲ್ಲಿ ಸಂಗೀತ ಒಲೇದಿದ್ದು ಶಿವನ ಡಮರುಗವನ್ನು ಅನುಕರಣೆ ಮಾಡಿ ಡೋಲು ಮತ್ತು ನಾದಸ್ವರ ಮೂಡಿ ಬಂದಿರುವ ಪ್ರತೀತಿ ಇದೆ. ಪುರಾತನ ಕಾಲದಿಂದಲೂ ದೇವತಾ ಕಾರ್ಯಗಳಲ್ಲಿ ಸವಿತಾ ಅಮಾಜದ ಡೋಲು ನಾದಸ್ವರವು ಮೊದಲಿಗೆ ಇದ್ದು ಮಂಗಳಕಾರ್ಯವನ್ನು,ಮಾಡುತ್ತಿದ್ದಾರೆ.ಈಗಲೂ ದೇವತಾ ಶುಭಕಾರ್ಯಗಳಲ್ಲಿ ಮೊದಲ ಡೋಲು ಮತ್ತು ನಾದಸ್ವರವಾಗಿರುತ್ತದೆ.ಇಂದಿಗೂ ಆಕಾಶವಾಣಿಯಲ್ಲಿ ಮೊದಲು ಡೋಲುಉ ಮತ್ತು ನಾದಸ್ವರದ ನಂತರವೇ ಬೇರೆ ಸಂಗೀತ ಕಾರ್ಯಕ್ರಮ ಮೂಡಿಬರುವುದನ್ನು ನಾವೇಲ್ಲರೂ ಗಮನಿಸಬಹುದು.ಮುಖ್ಯವಾಗಿ ಮದುವೆ ಶುಭಕಾರ್ಯಗಳಲ್ಲಿ ಇಂದಿಗೂ ಡೋಲು ಮತ್ತು ನಾದಸ್ವರ ಅತ್ಯವಶ್ಯಕವಾಗಿರುವುದನ್ನು ಕಾಣಬಹುದು.

ಪರಿಕರಗಳು[edit]

ಸವಿತಾ ಮಹರ್ಷಿಗೆ ಸೃಷ್ಟಿಕರ್ತರು ನಿಡಿರುವ ಪರಿಕರಗಳಲ್ಲಿ ಕತ್ತಿಯೂ ಒಂದು, ಶಿವನ ಬಲಗಣ್ಣಿನಿಂಧ ಹುಟ್ಟಿದ ಸವಿತಾ ಮಹರ್ಷಿಯ ದ್ಓತಕವಾಗಿ ಸವಿತಾ ಸಮುದಾಯದವರನ್ನು ಈಗಲೂ ಭಾರತದ ಹಲವು ಭಾಗಗಳಲ್ಲಿ ನಯನಜ ಕ್ಷತ್ರಿಯ ೆಂದೂ ಸಹ ಕರೆಯುತ್ತಾರೆ.ಹಿಗೇ ದೇಶದ ಹಲವು ಭಾಗಗಳಲ್ಲಿ ಸವಿತಾ ಸಮುದಾಯದವರು ಕ್ಷತ್ರಿಯರಾಗಿರುವುದನ್ನು ಸಹ ಕಾಣಬಹುದು.

ಐತಿಹಾಸಿಕ ಶಾಸನಗಳಲ್ಲಿ ಸವಿತಾ ಬಂದುಗಳ ಉಲ್ಲೇಖ[edit]

ಚೇರ ಚೋಳ ಮತ್ತು ಪಾಂಡ್ಯ ಻ರಸರ ಕಾಲದಲ್ಲಿ ಸವಿತಾ ಸಮಾಝದವರು ಮಂಗಳಕಾರರು ಎನ್ನುವದರಿಂದ ಬ್ರಾಹ್ಮಣರ ಹಾಗೇ ಮದುವೆ ಔತಣಗಳಿಗೆ ಆಮಂತ್ರಿತರಾಗುತ್ತಿದ್ದಾರೆಂಧು ಅಂದಿನ ಕಾಲದಿಂದಲೂ ಸವಿತ಻ ಸಮ಻ಜದವರು ಮದುವೆಯ ಪೌರೋಹಿತ್ಯ ಮಾಡುತ್ತಾ ಬಂದಿರುವರೇಂದು ಅನೇಕ ಮಹನಿಯರು ಲೇಖನಗಳಲ್ಲಿ ಬರೆದಿದ್ದಾರೆ. ಇದಲ್ಲದೆ 12 ಜನ ಕೈವಾಡದವರು ಎಂಬ ಗುಂಪಿನಲ್ಲಿ ಸವಿತ಻ ಸಮಾಜದವರು ಸಹ ಮಾನ್ಯರಾಗಿದ್ದಾರೆ. ದೇಶಭಾಗದವರು ಎಂದು ಹೇಳಿರುವುದರಿಂದ ಇವರು ನ್ಯಾಯ ನಿರ್ಣಯ ಮಾಡುವ ಸ್ಥಾನದಲ್ಲಿ ಸಹ ಇರುತ್ತಿದ್ದರೆಂದು ವ್ಯಕ್ತವಾಗುತ್ತದೆ.ಹೀಗಾಗಿ ಸವಿತಾ ಸಮಾಝದವರು ವೈದ್ಯರಾಗಿ, ಶಸ್ತ್ರಚಿಕಿತ್ಸಕರಾಗಿ ಜ್ಯೋತಿಷಿ ಪುರೋಹಿತರಾಗಿ ,ಮಂಗಳವಾದಕ ಸಂಗೀತಗಾರರಾಗಿ ಸಮಾಜ ಪ್ರಮುಖರಾಗಿ ಹಿಂದಿನಿಂದಲೂ ಮಾನ್ಯರಾಗಿದ್ದಾರೆಂದು ಹಲವು ಲೇಖನಗಳಲ್ಲಿ ಬರೆದಿದ್ದಾರೆ.

ಸವಿತಾಸಮಾಝದವರು ದೇವಸ್ಥಾನ,ಉತ್ಸವ,ವಿವಾಹಾದಿಗಳಲ್ಲಿ ಸಂಗೀತ ನುಡಿಸುತ್ತಿದ್ದಾರೆ.ಸಂಗೀತ ಹಿಂದಿನಿಂಧಲೂ ಪ್ರಸಿದ್ದವಾದ ಮೈಸೂರಿನ ದೊರೆ ಮುಮ್ಮಡಿ ಕೃಷ್ಣರಾಜ ಒಡೆಯರವರ ಕಾಲದಲ್ಲಿ ಕ್ರಿ.ಶ 1830 ರಲ್ಲಿದ ಯಾದವ ಕವಿಯ "ಕಲಾವತಿ ಪರಿಣಯ" ಎಂಬ ಗದ್ಯಕೃತಿಯಲ್ಲಿ ಸವಿತಾ ಸಮಾಜವನ್ನು ಮೌರಿ ಎಂಬ ವಾದ್ಯವನ್ನು ನುಡಿಸುವುದರಲ್ಲಿ ಪ್ರವೀಣನಾಗಿದ್ದನೆಂದು ದೇವರ ಉತ್ಸವಕಾಲಕ್ಕೆ ಈ ವಾದ್ಯವನ್ನು ನುಡಿಸುತ್ತಿದ್ದರು ಮತ್ತು ಸವಿತಾಸಮಾಜದವರು ಮಂಗಳಕಾರರು ಎಂದು ಹೇಳಿರುವ ಉಲ್ಲೇಖ ಹಳೆಯ ಗದ್ಯ ಸಾಹಿತ್ಯದಲ್ಲಿ ಸಿಗುತ್ತವೆ. ಹೀಗೆ ರಾಜಕೀಯ ಕಾರಣಕ್ಕೆ ಭೀನ್ನವಾಗಿ ಬಹುವವಿಧದ ಸೇವೆ ಸಲ್ಲಿಸುತ್ತಿದ್ದ ಕಾರಣಕ್ಕೆ ಬೇರೆ ಬೇರೆ ಕಡೆ ಇರುವ ಸವಿತಾಜನಾಂಗಕ್ಕೆ ಅರಸರು ತೆರಿಗೆ ಮಾನ್ಯತೆಯನ್ನು ನೀಡಿರುವ ಉಲ್ಲೇಖ ಇದೆ.

ಸವಿತಾಸಮಾಝದವರು ಕರ್ನಾಟಕದಲ್ಲಿ ವೀರಶೈವರನ್ನು ಅಪ್ಪಿದ ಕ್ಷೌರಿಕರು ಉಂಟು ಇದರಲ್ಲಿ ಬ್ರಾಹ್ಮಣ (ಅಥವಾ ಸಾತಾನಿ) ಗುರುಗಳಿಂದ ಶಂಖ ಚಕ್ರ ನಾಮಗಳ ಮುದ್ರೆಯನ್ನು ಪಡೆದ ವೈಷ್ಣವರು ಮಾಂಸ ಮದ್ಯಗಳನ್ನು ವರ್ಜಿಸಿರುತ್ತಿದ್ದರು ಮತ್ತು ಪೌರೋಹಿತ್ಯವನ್ನು ಮಾಡುತ್ತಿದ್ದರು ಎಂದು ತಿಳಿದು ಬರುತ್ತದೆ. ವಿಜಯನಗರದ ಅರಸರಲ್ಲಿ ತುಳುವ ಮನೆತನದವರು ವೈಷ್ಣವ ದೇವಾಲಯ ಮಠ ಹಾಘೂ ಗುರುಗಳಿಗೆ ಹೆಚ್ಚಿನ ಪ್ರಾಶಸ್ಯ ಕೊಟ್ಟಿದ್ದರು.ಈಗಾಗಿ ವೈಷ್ಣವ ಸಂಪ್ರದಾಯಕ್ಕೆ ಸೇರಿದ್ದರೆಂಬ ಸಂಗತಿಯು ಸಹ ಅವರನ್ನು ಅರಸರ ದೃಷ್ಟಿಯಲ್ಲಿ ಮಾನ್ಯರಾಗಿದ್ದರೆಂದು ಸಾಹಿತ್ಯದಲ್ಲಿ ಉಲ್ಲೇಖವಿದೆ. ವಿಜಯನಗರದ ದೊರೆ ಇಮ್ಮಡಿ ದೇವರಾಯನ ಕಾಲದಲ್ಲಿ ಕರ್ನಾಟಕಕ್ಕೆ ಬಂದಿದ್ದ ಇಟಲಿಯ ಪ್ರವಾಸಿ ನಿಕೂರು-ಡೆ-ಕೊಂಡಿಯು "ನಮ್ಮಲ್ಲಿ ಇರುವಂತೆ ಈ ದೇಶದಲ್ಲಿಯೂ ಕ್ಷೌರಿಕನಿದ್ದಾರೆ" ಇವರು ಆಳುತನದ 4 ಆಯುಷ್ಯದಲ್ಲಿ ಯುರೋಪಿಯನ್ನರು ಹೊಲುತ್ತಾರೆ ಎಂದು ಉಲ್ಲೇಖವಿದೆ ಹಾಗಾದರೆ ಸವಿತಾ ಸಮಾಜದವರು ಭಾರತ ದೇಶದಲ್ಲಿದೆ ಪ್ರಪಂಚದಾದ್ಯಂತ ಆಯುಷ್ಕರ್ಮವನ್ನು ಮಾಡುತ್ತಿದ್ದರೆಂದು ತಿಳಿಯಬಹುದು.

ಭಾರತ ದೇಶದ ಹಲವು ಭಾಗಗಳಲ್ಲಿ ಸವಿತಾ ಸಮಾಜದವರ ಹೆಸರುಗಳ ಅಂತ್ಯದಲ್ಲಿ (ಶಾಸ್ತ್ರಿ) ಎಂಬ ಮಾತು ತುಂಬಾ ಗಮನಾರ್ಹವಾದವು. ಈ ಒಜ(ಶಾಸ್ತ್ರೀ) ಎಂಬುದು ಎಲ್ಲ ಶಾಸನಗಳಲ್ಲಿ ತಪ್ಪದೆ ಅವರ ಹೆಸರಿನ (ಅಂತ್ಯ) ಭಾಗವೆಂಬಂತೆ ಬಂದಿದೆ. ಆಚಾರ ಎಂದರೆ "ಆಚಾರ್ಯ " ಎಂದರ್ಥ ಈ ಶಬ್ದ ಸಮಾಜದವರಿಗೆ ಚೆನ್ನಾಗಿ ಒಪ್ಪುವಂತದ್ದು ಕೂಡ ಆಗಿದೆ.ಸವಿತಾ ಸಮಾಝದವರು ಕುಲಕಸುಬಿನಷ್ಟೆ ಅಲ್ಲದೆ,ಸಂಗೀತ ವೇದ್ಯ,ಜ್ಯೋತಿಷಿ ಪೌರೋಹಿತ್ಯಗಳನ್ನು ಸಹ ಬಲ್ಲವರಾಗಿದ್ದರು ಈಗಲೂ ಇಂತ ಪರಂರೆಯನ್ನು ಅವರು ಮುಂದುವರಿಸಿಕೊಂಡು ಬಂದಿರುವುದನ್ನು ಕಾಣಬಹುದು ಹಾಗಾಗಿ ಇವರನ್ನು ಕೆಲವೆಡೆ ಪಂಡಿತರು ಎಂದು ಕರೆಯುತ್ತಾರೆ ಎಂದು ಇತಿಹಾಸ ತಜ್ಞ ಡಾ: ಸಾಲೆಮತ್ತೂರ ರವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಶ್ರೀ.ಹೆಚ್ ವಿ.ನಂಜುಡಯ್ಯನವರು ಮತ್ತು ಎಲ್.ಕೆ ಅನಂತಕೃಷ್ಣ ಅಯ್ಯರ್ ಅವರು ಸವಿತಾ ಸಮುದಾಯದವರ ಬಗ್ಗೆ ಕೊಟ್ಟರುವ ವಿವರದಲ್ಲಿ ಇವರ ಬಗೆಗೆ ಕೆಲವು ಅಂಶಗಳು ಕಾಣ ಸಿಗುತ್ತದೆ.ಅದರಲ್ಲಿ ಖಂಡೋಜಿ ತೀಮ್ಮೋಜಿ ಎಂಬ ವ್ಯಕ್ತಿಗಳ ಚಿತ್ರದುರ್ಗದಲ್ಲಿ ಒಂದು ಅಪ್ರಕಟಿತ ಶಾನ ಹಾಗೂಅದರ ಜತೆಗಿನ ಒಬ್ಬ ಶಿಲ್ಪದ ಕೆತ್ತನೆಯಿಂದ ಹಲವಾರು ವಿಚಾರಗಳನ್ನು ಬರೆದಿದ್ದಾರೆ .

ಆಗಿನ ವಿಜಯನಗರದ ದೊರೆಗಳ ಹಾಗೂ ಅವರ ಸಮೀಪ ಸಂಬಂದಿಗಳ ದೃಷ್ಟಯಲ್ಲಿ -ಅತೀವ ಮನ್ನಣೆಗೆ ಪಾತ್ರರಾಗಿದ್ದರು. ಎಂಬ ಸಂಗತಿ ಸ್ಪಷ್ಟವಾಗುತ್ತದೆ.ವಿಜಯನಗರದ ಅರಸರುಗಳು ಸವಿತಾ ಸಮಾಜದವರಿಗೆ ತೆರಿಗೆ ಮಾನ್ಯತೆಯನ್ನು ವಿಜಯನಗರದ ನಂತರದಲ್ಲಿ ಸಾಕಷ್ಟು ಕಾಲ ವಂಶ ಪಾರಂಪರ್ಯವಾಗಿ ಈ ಜನಾಂಗದವರಿಗೆ ಸಲ್ಲುತ್ತಾ ಬಂದಿದ್ದು ಎಂಬುದಕ್ಕೆ ಅನೇಕ ಶಾಸನಗಳು ಸಾಕ್ಷಿಯಾಗಿವೆ.

ನಮ್ಮ ಸವಿತಾ ಸಮಾಜದವರ ಹೋರಾಟದ ಬಗ್ಗೆ ಮಾಹಿತಿನ್ನು ತಿಳಿಯಲು ಇತಿಹಾಸವನ್ನು ಅವಲೋಕಿಸಿದಾಗ ಮಧ್ಯಯುಗೀನ ಕರ್ನಾಟಕದಲ್ಲಿ ಶಾಸನ, ರಾಷ್ಟ್ರಕೂಟರ ಕಲಾಶಾಸನ, ವಿಜಯನಗರದ ಕಲಾಶಾಸನ, ಮತ್ತು ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳನ್ನು ಅಧ್ಯಯನ ಮಾಡಿದಾಗ ನಮ್ಮ ಸವಿತಾಸಮಾಜದವರ ಐತಿಹಾಸಿಕ ಮಾಹಿತಿ ಉಲ್ಲೇಖವಾಗಿರುವುದನ್ನು ಕಾಣಬಹುದಾಗಿದೆ. ಕ್ರಿಸ್ತಶಕ1513 ಅಚ್ಯುತ ರಾಯನ ಕಾಲದ ಶಾಸನ ಒಂದು ತಿಪಟೂರು ತಾಲೂಕ ವನ್ನವಳ್ಳಿ ಗ್ರಾಮದಲ್ಲಿ ದೊರೆತಿದ್ದು ಈ ಶಾಸನದಲ್ಲಿ ಕ್ಷೌರಿಕ ವೃತ್ತಿಗೆ ತೆರಿಗೆ ಹಾಕುವದನ್ನು ವಿರೋದಿಸಿ ತಿಪಟೂರಿನ ಸವಿತಾಸಮಾಜದ ಬಂಧುಗಳು ಪ್ರತಿಬಟನೆ ಮಾಡಿದ ಹಿನ್ನೆಲೆಯಲ್ಲಿ ರಾಯನಿಯನಿಂದ ಬಂದ ಆಜ್ಞಾತಪತ್ರದಲ್ಲಿ ತಿಪಟೂರಿನ ಕ್ಷೌರಿ ವೃತ್ತಿ ತೆರಿಗೆ ಮತ್ತಿತರ ತೆರಿಗೆಗಳಿಂದ ಮುಕ್ತರಾಗಿರುತ್ತಾರೆ ಎಂಬ ಅಂಶವು ಶಾಸನದಲ್ಲಿ ಉಲ್ಲೇಖವಾಗಿದೆ. ಕ್ರಿ.ಶ. 1534ರ ಶಾಸನದಲ್ಲಿ ಸವಿತಾ ಸಮುದಾಯದ ಬೈರಪ್ಪ ನಾಯಕನ ಮಗ ಕೃಷ್ಣಪ್ಪ ನಾಯಕ ಕೊಗಲಿ ಜಿಲ್ಲೆಯ ಕೊಟ್ಟುರು ಮತ್ತು 32 ಪ್ರಾಂತ್ಯಗಳನ್ನು ಆಳುತ್ತಿದ್ದನೆಂದು ತಿಳಿಯಬಹುದಾಗಿದೆ. ಈ ಎಲ್ಲಾ ಸಂಗತಿಯನ್ನು ತಿಳಿಸುವ ಻ನೇಕ ಶಾಸನಗಳ ಮೇಲೆ ಸವಿತಾ ಸಮುದಾಯದ ಸಾಧನಗಳಾದ ಕತ್ತಿ,ಕನ್ನಡಿ ,ಕತ್ರಿ ಮುಂತಾದವುಗಳನ್ನು ಕೆತ್ತಲಾಗಿದೆ.

随便看

 

开放百科全书收录14589846条英语、德语、日语等多语种百科知识,基本涵盖了大多数领域的百科知识,是一部内容自由、开放的电子版国际百科全书。

 

Copyright © 2023 OENC.NET All Rights Reserved
京ICP备2021023879号 更新时间:2024/9/25 0:41:34